ಮೃಗಾಲಯದ ವೀಕ್ಷಕ ಪ್ರವಾಸಿಗರಿಗೆ ಸುಗಮ ಸಂಚಾರಕ್ಕೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದ್ದರೂ, ಮೃಗಾಲಯಕ್ಕೆ ಬರುತ್ತಿರುವ ವೀಕ್ಷಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮೃಗಾಲಯದ ಮುಂಭಾಗದಲ್ಲಿನ ವಾಹನ ಸಂಚಾರದ ದಟ್ಟಣೆಯೂ ಹೆಚ್ಚಾಗುತ್ತಿದ್ದು, ಇದರಿಂದ ಮೃಗಾಲಯ ವೀಕ್ಷಕರು ಮಾತ್ರವಲ್ಲ ಸಾರ್ವಜನಿಕರೂ ಒಳಗೊಂಡಂತೆ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದನ್ನು ಗಮನಿಸಲಾಗಿರುತ್ತದೆ..
ಆದುದರಿಂದ, ವೀಕ್ಷಕರಿಗೆ/ಸಾರ್ವಜನಿಕರಿಗೆ ಅನುಕೂಲತೆ ಕಲ್ಪಿಸುವ ಸಲುವಾಗಿ ಮೃಗಾಲಯದ ಮುಂದಿನ ಪಾರ್ಕಿಂಗ್ ಸ್ಥಳದಿಂದ ಮೃಗಾಲಯದ ಮುಖ್ಯ ಪ್ರವೇಶ ದ್ವಾರದ ವರೆಗೆ “ಅಂಡರ್ ಪಾಸ್” ನಿರ್ಮಾಣ ಕಾಮಗಾರಿಯನ್ನು 2019-20ನೇ ಆರ್ಥಿಕ ಸಾಲಿನಲ್ಲಿ ಪ್ರಾರಂಭಿಸಿ, ಡಿಸೆಂಬರ್ 2021ರಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಈ ಕಾಮಗಾರಿಗೆ ರೂ.189.00 ಲಕ್ಷಗಳನ್ನು ವಿನಿಯೋಗಿಸಲಾಗಿದ್ದು, ಮೆ. ವಿನ್ಯಾಸ್ ಬಿಲ್ಡರ್ಸ್, ಬೆಂಗಳೂರು, ರವರು ಈ ಕಾಮಗಾರಿಯ ಟೆಂಡರ್‍ದಾರರಾಗಿರುತ್ತಾರೆ.