ವನ್ಯಜೀವಿ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕುರಿತು ಕಾರ್ಯಾಗಾರ


ವನ್ಯಜೀವಿ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕುರಿತು ಕಾರ್ಯಾಗಾರವನ್ನು ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರ ಅವರು ಹಂಪಿ ಮೃಗಾಲಯದಲ್ಲಿ ಆಯೋಜಿಸಿದ್ದರು. ರಕ್ಷಿಸಿದ ಚಿರತೆಯ ರಾಸಾಯನಿಕ ನಿಗ್ರಹದ ಬಗ್ಗೆ  ಹಾಗು ನಿಗ್ರಹಿಸುವ ಉಪಕರಣಗಳ ಬಗ್ಗೆ ಡೆಮೊವನ್ನು ಮೃಗಾಲಯದ ವೈದ್ಯರು ನೀಡಿದರು. ಕರ್ನಾಟಕ ಅರಣ್ಯ ಇಲಾಖೆ ಮತ್ತು ಹಂಪಿ ಮೃಗಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.