ಮೃಗಾಲಯದಲ್ಲಿ ಜೀಬ್ರಾ ಮನೆ ಉದ್ಘಾಟನೆ


ಇಸ್ರೇಲ್‍ನ ಅವಿವ ಸಫಾರಿ ಪಾರ್ಕಿನಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ತಂದಿರುವ ಜೀಬ್ರಾ ಮನೆಯನ್ನು ಮಾನ್ಯ ಅರಣ್ಯ ಸಚಿವರು ಶ್ರೀ ಆರ್. ಶಂಕರ್, ಅವರು ಶುಕ್ರವಾರ ಉದ್ಘಾಟಿಸಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಶ್ರೀ ಸಿ. ಜಯರಾಂ, ಭಾ.ಅ.ಸೇ., ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಬಿ.ಪಿ. ರವಿ, ಭಾ.ಅ.ಸೇ., ಹಾಗೂ ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಅಜಿತ್ ಕುಲಕರ್ಣಿ, ಭಾ.ಅ.ಸೇ., ಮುಂತಾದವರು ಭಾಗವಹಿಸಿದ್ದರು.